ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್ಐಆರ್ ಚಿತ್ರ ಬಿಡುಗಡೆ* *ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ
ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್ಐಆರ್ ಚಿತ್ರ ಬಿಡುಗಡೆ
ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಇದೀಗ ತಮ್ಮದೇ ಹೋಮ್ ಬ್ಯಾನರ್ ಮೂಲಕ ಹೊಸ ಸಿನಿಮಾ ನಿರ್ಮಿಸಿದ್ದಾರೆ. ಆ ಚಿತ್ರಕ್ಕೆ ಎಫ್ಐಆರ್ ಎಂದು ಶೀರ್ಷಿಕೆಯೂ ಈಗಾಗಲೇ ಅಂತಿಮವಾಗಿದೆ.
ಅಷ್ಟೇ ಅಲ್ಲ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸನಿಹ ಬಂದಿದೆ ಈ ಸಿನಿಮಾ. ಇನ್ನೇನು ಇದೇ ಫೆ.11ಕ್ಕೆ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಆ್ಯಕ್ಷನ್ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ಮನು ಆನಂದ್ ನಿರ್ದೇಶನ ಮಾಡಿದ್ದಾರೆ. ಸಾಮಾನ್ಯ ಹೇಗೆ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಬಿಂಬಿಸಲಾಗುತ್ತದೆ? ಆತ ಹೇಗೆ ತಾನು ನಿರಪರಾಧಿ ಅಲ್ಲ ಎಂಬುದನ್ನು ಸಾಬೀತು ಪಡಿಸುತ್ತಾನೇ ಎಂಬುದೇ ಈ ಸಿನಿಮಾದ ಅಸಲಿ ಕಥೆ. ಭಯೋತ್ಪಾದನೆ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಇರ್ಫಾನ್ ಅಹ್ಮದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯೂ ಆಗಿದ್ದಾರೆ. ಈ ಚಿತ್ರದ ಸಲುವಾಗಿ ದೇಹವನ್ನು ಹುರಿಗೊಳಿಸಿಕೊಂಡಿರುವ ವಿಷ್ಣು, ಸಿಕ್ಸ್ ಪ್ಯಾಕ್ನಲ್ಲಿಯೂ ಎದುರಾಗಿದ್ದಾರೆ.
ಮಂಜಿಮ್ ಮೋಹನ್, ರೆಬಾ ಮೋನಿಕಾ ಜಾನ್, ರೈಜ್ ವಿಲ್ಸನ್ ಈ ಚಿತ್ರದ ಮೂವರು ನಾಯಕಿಯರು. ಗೌತಮ್ ಮೆನನ್ ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿದ್ದಾರೆ. ಇನ್ನುಳಿದಂತೆ ಮಾಲಾ ಪಾರ್ವತಿ, ಅಮಾನ್ ಪ್ರವೀಣ್ ಕುಮಾರ್, ರಾಕೇಶ್ ಬ್ರಹ್ಮಾನಂದಂ, ಅಭಿಷೇಕ್ ಜೋಸೆಫ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಎಫ್ಐಆರ್ ಚಿತ್ರವನ್ನು ಸರಿ ಸುಮಾರು 80 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಹೈದರಾಬಾದ್, ಕೋಯಿಮತ್ತೂರು, ಕೊಚ್ಚಿ, ದೆಹಲಿ ಮತ್ತು ಕೋಲೋಂಬೋದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಅರುಲ್ ವಿನ್ಸಂಟ್ ಛಾಯಾಗ್ರಹಣ, ಅಶ್ವತ್ಥ ಸಂಗೀತ, ಜಿಕೆ ಪ್ರಸನ್ನ ಸಂಕಲನ ಚಿತ್ರಕ್ಕಿದೆ. ಉದಯನಿಧಿ ಸ್ಟಾಲಿನ್ ಅವರ ರೆಡ್ ಗೇಂಟ್ ಮೂವಿಸ್ ಸಂಸ್ಥೆ ಈ ಚಿತ್ರವನ್ನು ತಮಿಳುನಾಡಿನಲ್ಲಿ ಅರ್ಪಿಸುತ್ತಿದೆ. ತೆಲುಗು ನಾಡಿನಲ್ಲಿ ಅಭಿಷೇಕ್ ಪಿಕ್ಚರ್ಸ್ ಜವಾಬ್ದಾರಿ ಹೊತ್ತಿದ್ದು, ಫೆ. 11ಕ್ಕೆ ಚಿತ್ರ ತೆರೆಗೆ ಬರಲಿದೆ.
Recent comments