Skip to main content
ಒಡೆಯ ಬಂದ.

ಒಡೆಯ ಬಂದ.

ಆಳಾಗಿ ದುಡಿಯೋಕೂ ಗೊತ್ತು.. ಅರಸನಂತೆ ಮೆರಿಯೋಕೂ ಗೊತ್ತಿರೋ ಒಡೆಯ ಬಂದ.

ಒಡೆಯ

ಡಿ ಬಾಸ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಂಡ್ ಸಿನಿಮಾ ಒಡೆಯದ ಟ್ರೇಲರ್ ರಿಲೀಸ್ ಆಗಿದೆ.. ಸಿನಿಮಾದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಮಾಸ್ ಡೈಲಾಗ್ಗಳು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡೋದು ಪಕ್ಕಾ.. ಥೇಟ್ ಹಳ್ಳಿ ಸೊಗಡನ್ನ ಬಿಂಬಿಸುವಂತ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಲವ್, ಸೆಂಟಿಮೆಂಟ್, ಕಾಮಿಡಿ ಜೊತೆಗೆ ಌಕ್ಷನ್ ಇದೆ.. ಕುರುಕ್ಷೇತ್ರ ಸಿನಿಮಾ ಬಳಿಕ ಒಡೆಯನಾಗಿ ಬರ್ತಿರೋ ಚಾಲೆಂಜಿಗ್ ಸ್ಟಾರ್ ಇಲ್ಲೂ ರೈತರ ಪರ ಧ್ವನಿ ಎತ್ತುವ ಕೆಲಸ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನ ರವಾನಿಸುವ ಕೆಲಸಮಾಡಲು ಹೊರಟಿದ್ದಾರೆ.. ಯೂಟ್ಯೂಬ್ನಲ್ಲಿ ಸೆನ್ಸೇಷನಲ್ ಕ್ರಿಯೆಟ್ ಮಾಡ್ತಿರೋ ಒಡೆಯ ಮತ್ತೊಂದು ಯಜಮಾನ ಚಿತ್ರ ಅಂದ್ರೂ ತಪ್ಪಾಗೋದಿಲ್ಲ..

​  ಒಡೆಯ

ನಿರ್ದೇಶಕ ಎಂ.ಡಿ.ಶ್ರೀಧರ್, ಸಂದೇಶ್ ನಾಗಾರಾಜ್ ನಿರ್ಮಾಣದ ಈ ಚಿತ್ರದಲ್ಲಿ ಕೊಡಗು ಮೂಲಕದ ರಾಘವಿ ತಿಮ್ಮಯ್ಯ ಒಡೆಯನಿಗೆ ಒಡತಿಯಾಗಿದ್ದಾಳೆ. ಹಿರಿಯ ನಟ ದೇವ್ ರಾಜ್, ಕಾಮಿಡಿ ಕಿಂಗ್ ಸಾಧುಕೋಕಿಲಾ, ಚಿಕ್ಕಣ್ಣ, ನಯಾನ ಒಡೆಯನ ಅರಮನೆಯ ಸದಸ್ಯರಾಗಿದ್ದಾರೆ.. ಡಿಸೆಂಬರ್ 20ಕ್ಕೆ ಒಡೆಯ ಸಿನಿಮಾ ರಿಲೀಸ್ ಆಗ್ತಿದ್ದಿದ್ದು, ಈಗ ಟ್ರೇಲರ್ ರಿಲೀಸ್ ಮಾಡಿರುವ ಒಡೆಯ ಚಿತ್ರತಂಡಕ್ಕೆ ಡಿ ಬಾಸ್ ಅಭಿಮಾನಿಗಳು ಜೈಕಾರ ಹಾಕ್ತಿದ್ದಾರೆ..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.