ಡಿ ಬಾಸ್ ಅವರ ಕನ್ನಡ ಚಿತ್ರರಂಗದಲ್ಲಿನ 23 ವರ್ಷದ ಚಾಲೆಂಜ್ .
ಡಿ ಬಾಸ್ ಅವರ ಕನ್ನಡ ಚಿತ್ರರಂಗದಲ್ಲಿನ 23 ವರ್ಷದ ಚಾಲೆಂಜ್ .
ಮೈಸೂರು:ಕನ್ನಡ ಚಿತ್ರರಂಗದಲ್ಲಿನ ಮಾಸ್,ಕ್ಲಾಸ್,ಕನ್ನಡ ಅಭಿಮಾನಿಗಳ ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ನ ಚಂದನವನಕ್ಕೆ ಕಾಲಿರಿಸಿ ಇಂದಿಗೆ 23 ವರ್ಷಗಳು ಕಳೆದಿವೆ. ನೂರಾರು ಕಷ್ಟ,ಸವಾಲುಗಳನ್ನು ಮೆಟ್ಟಿ ನಿಂತ್ತು ತಮ್ಮ ಅಭಿನಯದ ಜೊತೆಗೆ,ತಾವು ಮಾಡುವ ಸಾಮಾಜಿಕ ಸೇವೆಗಳ ಮೂಲಕ ಅಭಿಮಾನಿಗಳ ಪಾಲಿನ ಯಜಮಾನರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ "ಡಿ ಬಾಸ್ " 23 ವರ್ಷ ಪೂರೈಸಿದ ಹಿನ್ನಲೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಮೈಸೂರು ವತಿಯಿಂದ ಮೈಸೂರಿನ ಅನಾಥ ಆಶ್ರಮಕ್ಕೆ ,ಮಾಸ್ಕ್ , ಸ್ಯಾನಿಟೈಸರ್ ವಿತರಿಸಲಾಯಿತು.
Recent comments